ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ ಮಠದಲ್ಲಿ ನೆರವೇರಿದ ಸಂಗೀತ ಸಂದ್ಯಾ ಕಾರ್ಯಕ್ರಮ.
Date : 08-07-2025
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-08.07.2025 ರಂದು ರಾತ್ರಿ:-08-00 ಗಂಟೆಗೆ ಶ್ರೀಮಠದ ಆವರಣದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕರಾದ ಸನ್ಮಾನ್ಯ ಶ್ರೀ ಜಯತೀರ್ಥ ಮೇವುಂಡಿ ಇವರಿಂದ ಸಂಗೀತ ಸಂದ್ಯಾ ಕಾರ್ಯಕ್ರಮ ನೆರವೇರಿತು. ಸದರ ಕಾರ್ಯಕ್ರಮದ ಪಾವನ ಸಾನಿದ್ಯವನ್ನು ನ್ಯಾಯ ವೇದಾಂತಾಚಾರ್ಯ ಪ. ಪೂ. ಶ್ರೀ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಪೂರ್ಣಾನಂದ ಆಶ್ರಮ, ಕಾಡರಕೊಪ್ಪ ಇವರು ವಹಿಸಿದ್ದರು. ದಿವ್ಯಸಾನಿದ್ಯವನ್ನು ಶ್ರೋ.ಬ್ರ ಸದ್ಗುರು ಸಹಜಯೋಗಿ ಶ್ರೀ ಸಹಜಾನಂದ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ಶ್ರೀ ಸಿದ್ಧಾರೂಢರ ದರ್ಶನ ಪೀಠ, ಚಿಕ್ಕನಂದಿ- ಮಹಾಲಿಂಗಪೂರ ಇವರು ವಹಿಸಿದ್ದರು. ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಶರಣಬಸವ ಚೋಳಿನ, ನಿಲಯ ನಿರ್ದೇಶಕರು, ಆಕಾಶವಾಣಿ ಕೇಂದ್ರ, ಧಾರವಾಡ ಇವರು ನೆರವೇರಿಸಿ ಸದ್ಗುರು ಶ್ರೀ ಸಿದ್ಧಾರೂಢರು ಭಜನೆ, ಕೀರ್ತನೆ, ಸಂಗೀತಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿರುತ್ತಾರೆ. ದೊಡ್ಡ ದೊಡ್ಡ ಕಲಾವಿದರು ಶ್ರೀಗಳವರ ಆಶೀರ್ವಾದವನ್ನು ಪಡೆದುಕೊಂಡು ಪ್ರಖ್ಯಾತಿಯನ್ನು ಪಡೆದು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಂಡಿರುತ್ತಾರೆ. ಅದೇ ರೀತಿಯಾಗಿ ಶ್ರೀ ಜಯತೀರ್ಥ ವೇವುಂಡಿಯವರಿಗೂ ಸಹಿತ ಶ್ರೀ ಸಿದ್ಧಾರೂಢರ ಆಶೀರ್ವಾದ ಶ್ರೀರಕ್ಷೆ ಇರುವುದರಿಂದ ಇವರು ಸಹಿತ ಉನ್ನತ ಸ್ಥಾನವನ್ನು ಪಡೆಯುವುದರಲ್ಲಿ ಸಂದೇಹವಿಲ್ಲ ಅಂತಾ ತಮ್ಮ ಎರಡು ನುಡಿಗಳನ್ನು ಹೇಳಿದರು. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಕೆ.ಎಲ್. ಪಾಟೀಲ, ಹಿರಿಯ ನ್ಯಾಯವಾದಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಹಾಗೂ ಧರ್ಮದರ್ಶಿಗಳು, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ, ಹುಬ್ಬಳ್ಳಿ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ವಹಿಸಿದ್ದರು. ಕಲಾವಿದರಾದ ಪಂಡಿತ ಶ್ರೀ ಜಯತೀರ್ಥ ವೇವುಂಡಿ ಇವರು ನನ್ನ ಹಾಡುಗಾರಿಕೆಯ ಜೀವನವನ್ನು 34 ವರ್ಷಗಳ ಹಿಂದೆ ಶ್ರೀ ಸಿದ್ಧಾರೂಢರ ಸನ್ನಿಧಾನದಲ್ಲಿ ನೆರವೇರಿಸಿದ್ದು ನನ್ನ ಪೂರ್ವಜನ್ಮದ ಪುಣ್ಯ ಅಂತಾ ಭಾವಿಸಿದ್ದೇನೆ. ನಾನು ಏನಾದರೂ ಸಾಧನೆ ಮಾಡುತ್ತಿದ್ದರೆ ಅದು ಶ್ರೀ ಸಿದ್ಧಾರೂಢರ ಆಶೀರ್ವಾದ ಅಂತಾ ತಮ್ಮ ಅನುಭವ ಹಂಚಿಕೊ0ಡರು. ಕಾರ್ಯಕ್ರಮದ ನಿರೂಪಣೆ ಮತ್ತು ಗಣ್ಯರ ಪರಿಚಯವನ್ನು ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ನೆರವೇರಿಸಿದರು. ಪ್ರಾರ್ಥನೆಯನ್ನು ಶ್ರೀ ತುಕಾರಾಮ ಕಠಾರೆ ಇವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.